ಶರಣಬಸವೇಶ್ವರ ಕೆರೆಯು ಕಲಬುರಗಿ ನಗರದ ಅತ್ಯಂತ ಹಳೆಯ ಕೆರೆಗಳಲ್ಲಿ ಒಂದಾಗಿದೆ. ಸಮೀಪದಲ್ಲೇ ಇರುವ ಶರಣಬಸವೇಶ್ವರ ದೇವಸ್ಥಾನದಿಂದ ಈ ಕೆರೆಗೆ ಈ ಹೆಸರು ಬಂದಿದೆ. ಈ ಕೆರೆಯನ್ನು "ಅಪ್ಪನ ಕೆರೆ" ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ ಈ ಕೆರೆಯು ಈ ಹಿಂದೆ ಕಲ್ಲಿನ ಕ್ವಾರಿಯಾಗಿತ್ತು, ಇದನ್ನು ಕಲಬುರಗಿ ಕೋಟೆಯ ನಿರ್ಮಾಣಕ್ಕೆ ಬಳಸಲಾಯಿತು. ಸುಮಾರು 178 ವರ್ಷಗಳ ಹಿಂದೆ ನಿಜಾಮರ ಆಡಳಿತದ ಅವಧಿಯಲ್ಲಿ ಇದನ್ನು ಕೆರೆಯಾಗಿ ಅಭಿವೃದ್ಧಿಪಡಿಸಲಾಯಿತು. ಸ್ವಾತಂತ್ರ್ಯ ಬರುವವರೆಗೂ ಈ ಕೆರೆಯನ್ನು ನಿಜಾಮರ ಆಡಳಿತ ನಿರ್ವಹಿಸುತ್ತಿತ್ತು. ಪ್ರಸ್ತುತ ಈ ಕೆರೆಯು ಸ್ವಾದೇಶಿಕ ಆಯುಕ್ತರು & ಅಧ್ಯಕ್ಷರು ಶರಣಬಸವೇಶ್ವರ ಕೆರೆ ನಿರ್ವಾಹಣ ಪ್ರಾಧಿಕಾರದ ಆಡಳಿತ ನಿಯಂತ್ರಣದಲ್ಲಿರುತ್ತದೆ. ಈ ಮೊದಲು ಈ ಕೆರೆಯು ಹೆಚ್ಚು ಕಲುಷಿತಗೊಳ್ಳುತ್ತ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತಿತ್ತು. ಕಾಲಕಾಲಕ್ಕೆ ಜಿಲ್ಲಾಡಳಿತವು ಕೆರೆ ಸುಧಾರಣೆಗೆ ಸಮಗ್ರವಾಗಿ ಪ್ರಯತ್ನಿಸಿತು.